ಸಿದ್ದರಾಮಯ್ಯ ಏನ್ ಮಾಡಿದ್ರೂ ಈಗ ಸುದ್ದಿ.. ಸದ್ದು.. ವಿವಾದ ಆಗ್ತಲೇ ಇದೆ. ಮೀನೂಟ ತಿಂದು ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಹೋಗಿದ್ರು ಅಂತ ಈ ಹಿಂದೆ ವಿವಾದವಾಗಿತ್ತು. ಇದೀಗ ಕೊಡಗಿನ ಸರದಿ. ಮೊಟ್ಟೆ ವಿವಾದದ ಮಧ್ಯೆ ಮಾಂಸದೂಟದ ವಿವಾದ ಸಿಕ್ಕಾಪಟ್ಟೆ ಚರ್ಚೆಗೀಡಾಗಿದೆ. ನಾಟಿಕೋಟಿ ಊಟ ಮಾಡಿ ಕೊಡ್ಲಿಪೇಟೆಯ ಬಸವೇಶ್ವರ ದೇಗುಲಕ್ಕೆ ಹೋಗಿದ್ದರು ಅಂತ ಟೀಕೆಗೆ ಗುರಿಯಾಗಿದೆ. ಅಲ್ಲದೆ, ವಿಡಿಯೋಗಳು ವೈರಲ್ ಆಗಿವೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ್ದು, ನಾನು ಮಧ್ಯಾಹ್ನ ಊಟ ಮಾಡಿದ್ದು, ಸಂಜೆ ವಾಪಸ್ ಬರುವಾಗ ಪೂಜೆ ಹಮ್ಮಿಕೊಂಡಿದ್ದರು. ಅಲ್ಲಿಗೆ ಹೋಗಿದ್ದೆ. ದೇವರು ಇಂಥದ್ದೇ ತಿನ್ನಿ ಅಂತ ಹೇಳಿದ್ದಾನಾ..? ರಾತ್ರಿ ತಿಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗ್ಬೋದು.. ಮಧ್ಯಾಹ್ನ ತಿಂದ್ಬಿಟ್ಟು ಸಾಯಂಕಾಲ ಹೋಗೋಕಾಲ್ವಪ್ಪಾ..? ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ. ಚೆನ್ನಾಗಿರೋ ಕಡೆ ಬೆಂಕಿ ಹೆಚ್ಚೋದೇ ಅವರ ಕೆಲಸ. ವಿಷಯ ಹಾಕೋದೇ ಕೆಲಸ ಅಂತ ಕಿಡಿಕಾರಿದ್ದಾರೆ. ಇನ್ನು, ಸಿದ್ದರಾಮಯ್ಯ ಆಪ್ತ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸ್ಪಷ್ಟನೆ ಕೊಟ್ಟಿದ್ದು, ಸಿದ್ದರಾಮಯ್ಯ ಅವರು ಅಕ್ಕಿರೊಟ್ಟಿ, ಕಾಳು ಪಲ್ಯ ಊಟ ಮಾಡಿದ್ರು. ಗೋಕುಲಾಷ್ಠಮಿ ಆಗಿದ್ದ ಕಾರಣ ಮಾಂಸಾಹಾರ ಮಾಡಿಲ್ಲ. ಇದೆಲ್ಲಾ ಅಪ್ಪಚ್ಚು ರಂಜನ್ ಸೃಷ್ಠಿ. ವೈರಲ್ ಆಗಿರೋ ಫೋಟೋ ಚಂದ್ರಕಲಾ ನಿವಾಸದ್ದು ಅಂದಿದ್ದಾರೆ. ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ ಕೂಡ ನಮ್ಮ ಮನೆಯಿಂದ ನಾಟಿಕೋಳಿ ಸಾರು, ಅಕ್ಕಿರೊಟ್ಟಿ, ಕಳಲೆ ಮಾಡಿಸಿದ್ದೆ. ಸಿದ್ದರಾಮಯ್ಯ ಅವರು ನಾನ್‍ವೆಜ್ ತಿನ್ನಲಿಲ್ಲ. ಮಳೆಗಾಲದ ವಿಶೇಷ ಅಂತ ಕಳಲೆ ಜೊತೆಗೆ ಅಕ್ಕಿರೊಟ್ಟಿ, ತರಕಾರಿ ಸಾರು ತಿಂದರು ಅಂತ ಸ್ಪಷ್ಟ ಪಡಿಸಿದ್ದಾರೆ. ಈ ಮಧ್ಯೆ, ಸಚಿವ ಸೋಮಶೇಖರ್ ವಾಗ್ದಾಳಿ ನಡೆಸಿದ್ದು, ನಾವು ಮಾಂಸ ತಿಂದು ದೇಗುಲದ ಕಾಂಪೌಂಡ್ ಬಳಿಯೂ ಹೋಗಲ್ಲ. ಆದರೆ, ಸಿದ್ದರಾಮಯ್ಯಗೆ ಇದೆಲ್ಲಾ ಕಾಮನ್ ಆಗಿಬಿಟ್ಟಿದೆ ಅಂತ ಕಿಡಿಕಾರಿದ್ದಾರೆ.
#publictv #bigbulletin